ಈ ತಿಂಗಳು....

'...2015-16..ನೇ ಶೈಕ್ಷಣಿಕ ವರ್ಷ ದಲ್ಲಿ ನಮ್ಮ ಶಾಲೆಯು BEST PTA ಪ್ರಶಸ್ತಿ ಗಳಿಸಿದೆ.. ಈ ಪ್ರಶಸ್ತಿಯನ್ನು 2016 ಸಪ್ಟೆಂಬರ್ 5 ರಂದು ಜಿಲ್ಲಾಮಟ್ಟದ ಅಧ್ಯಾಪಕ ದಿನದಂದು CJHS CHEMNAD, KASARAGOD ನಲ್ಲಿ ನೀಡಲಾಯಿತು .....

Saturday, 29 November 2014

FOCUS 2015

ವಿದ್ಯಾಲಯ ವಿಕಸನ ಸೆಮಿನಾರ್ ಗೆ ತಯಾರಿ


WELCOME TO FOCUS -15


ಉಚಿತ ಸಮವಸ್ತ್ರ ವಿತರಣೆ


Friday, 3 October 2014

ಬಡಾಜೆ ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ನಾಡಹಬ್ಬ ದಸರಾ ಆಚರಣೆ


                ಬಡಾಜೆ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

                    ಮಂಜೇಶ್ವರ:ಬಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.ಮುಖ್ಯೋಪಾಧ್ಯರಾದ ಜಯಶಂಕರ್.ವಿ ಉಧ್ಘಾಟಿಸಿ,ಮಹಾತ್ಮ ಗಾಂಧಿಯ ಕುರಿತು ಮಾತನಾಡಿದರು.ವಿದ್ಯಾರ್ಥಿ ಫಾರಿಸ್ ಸ್ವಾಗತಿಸಿ, ಶಾಲಾ ನಾಯಕಿ ಅಫ್ನಾ ಧನ್ಯವಾದಗೈದರು.ಬಳಿಕ ಶಾಲಾ ಪರಿಸರವನ್ನು ಶುಚೀಕರಣಗೊಳಿಸಲಾಯಿತು.ಅಧ್ಯಾಪಕ ಅಶೋಕ್ ಕುಮಾರ್ ಕೊಡ್ಲಮೊಗರು, ಅಧ್ಯಾಪಕ ಎಮ್..ಸಿದ್ದೀಖ್ ಪಾತೂರು,ಅಧ್ಯಾಪಕಿ ಶೈಲಾಶ್ರೀ ಸಹಕರಿಸಿದರು. ಸಿಹಿ ತಿಂಡಿ ವಿತರಿಸಲಾಯಿತು.






              ಬಡಾಜೆ ಶಾಲೆಯಲ್ಲಿ ನಾಡಹಬ್ಬ ದಸರಾ ಆಚರಣೆ

                                        ಮಂಜೇಶ್ವರ:ಬಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಡ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ವರ್ಧೆಗಳನ್ನು ನಡೆಸಲಾಯಿತು.ಹಗ್ಗಜಗ್ಗಾಟ,ನಾಡಗೀತೆ,ಸಂಗೀತ ಕುರ್ಚಿ ಮೊದಲಾದ ಸ್ವರ್ಧೆಗಳನ್ನು ನಡೆಸಲಾಯಿತು.ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಶಿಕ್ಷಕರು ನಾಡಹಬ್ಬ ದಸರಾ ಆಚರಣೆಯ ಮಹತ್ವವನ್ನು ತಿಳಿಸಿದರು.ಅಧ್ಯಾಪಕ ಅಶೋಕ್ ಕುಮಾರ್ ಕೊಡ್ಲಮೊಗರು ನೇತೃತ್ವ ವಹಿಸಿದರು., ಹಿರಿಯ ಅಧ್ಯಾಪಕಿ ಶೈಲಾಶ್ರೀ ಉಧ್ಘಾಟಿಸಿದರು.,ಅಡುಗೆಯಾಳು ಲಲಿತಕ್ಕ ಸಹಕರಿಸಿದರು.



Tuesday, 9 September 2014

ಓಣಂ ಆಚರಣೆ

                          ಓಣಂ ಆಚರಣೆ 

ದಿನಾಂಕ 05/09/2014 ಶುಕ್ರವಾರ ಓಣಂ ಆಚರಣೆ ಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಶಾಲಾ ವಿದ್ಯಾರ್ಥಿಗಳೇ ಹೂಗಳನ್ನು ತಂದು ಪೂಕಳಂ ರಚಿಸಿದರು.

ಓಣಂ ಆಚರಣೆ 2014

ಓಣಂಗೆ ಬಂದ ಜೋಕರ್ ಗಳು

ಪೂಕಳಂ


ಮಾವೇಲಿ ವೇಷಧಾರಿ ಫಾರಿಸ್ IV STD


ಮಾವೇಲಿ ಶಾಲೆಗೆ ಬಂದಾಗ..


ಮಹಾಬಲಿಯೊಂದಿಗೆ ಶಾಲಾ ವಿದ್ಯಾರ್ಥಿಗಳಿಂದ ಸಂವಾದ



Tuesday, 19 August 2014

ಶಾಲಾ ಎಸೆಂಬ್ಲಿ

 
ಧ್ವಜಾರೋಹಣ ಕಾರ್ಯಕ್ರಮ

ಸಭಾಕಾರ್ಯಕ್ರಮ

ಪಿ.ಟಿ.ಎ. ಮಹಾಸಭೆಯಲ್ಲಿ ರಕ್ಷಕರು

ಪಿ.ಟಿ.ಎ. ಮಹಾಸಭೆಯಲ್ಲಿ ವಾರ್ಷಿಕ ವರದಿ ವಾಚನ

Friday, 15 August 2014

ದಿನಾಚರಣೆ

68ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಸ್ಥಳೀಯ ಜನಪ್ರತಿನಿಧಿ  ಶ್ರೀ ಯಾದವ ಬಡಾಜೆ ಧ್ವಜಾರೋಹಣಗೈದರು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಯೂಸೂಫ್ ಜಮಾಲ್ ವಹಿಸಿದರು.ಮುಖ್ಯೋಪಾಧ್ಯರಾದ ಶ್ರೀ ಜಯಶಂಕರ್.ವಿ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ವಿವರಿಸಿದರು.ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಶಾಲಕ್ಷಿ ಉಪಸ್ಥಿತರಿದ್ದರು.ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಹಳೆ ವಿದ್ಯಾರ್ಥಿಗಳು,ರಕ್ಷಕರು,ಊರವರು ಭಾಗವಹಿಸಿದರು.ಸ್ವರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.ಅಧ್ಯಾಪಕ ಅಶೋಕ್ ಕುಮಾರ್ ಸ್ವಾಗತಿಸಿದರು.ಅಧ್ಯಾಪಕ ಸಿದ್ದೀಕ್ ಪಾತೂರು ಧನ್ಯವಾದಗೈದರು.ಹಿರಿಯ ಶಿಕ್ಷಕಿ ಶೈಲಶ್ರೀ ,ಅಡುಗೆಯಾಳು ಲಲಿತಕ್ಕ ಹಾಗೂಉಳಿದ ಶಿಕ್ಷಕಿಯವರು ಸಹಕರಿಸಿದರು.

ಸ್ವಾತಂತ್ರ್ಯೋತ್ಸವ

68ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು


Saturday, 9 August 2014

school


ಶಾಲಾ ಚುನಾವಣೆ 2014

ವಿಜೇತ ಅಭ್ಯರ್ಥಿಯಿಂದ ವಿಜಯೋತ್ಸವ


ಮತದಾನದ ಗುರುತು ಹಾಕುವುದು.


ವಿಜಯೋತ್ಸವ


ಮತದಾನಗೈಯುತ್ತಿರುವುದು.



ಮತದಾನಗೈಯಲು ಸಾಲಿನಲ್ಲಿ ನಿಂತಿರುವುದು.


ಮತ ಎಣಿಕೆ


ಚುನಾವಣಾಧಿಕಾರಿಗಳು


Wednesday, 6 August 2014

ಸಾಕ್ಷರ 2014

'ಸಾಕ್ಷರ 2014'ರ ಉದ್ಘಾಟನೆ

ಶ್ರೀ ಯಾದವ ಬಡಾಜೆ [Member of manjeshwer panchayath]ಉದ್ಘಾಟಿಸಿದರು.ಶ್ರೀ ಯೂಸೂಫ್ ಜಮಾಲ್ [ಅಧ್ಯಕ್ಛರು,ರಕ್ಷಕ -ಶಿಕ್ಷಕ ಸಂಘ]ಅಧ್ಯಕ್ಷತೆ ವಹಿಸಿದರು.ಮುಖ್ಯೋಪಾಧ್ಯಾಯ ಶ್ರೀ ಜಯಶಂಕರ್ ಪ್ರಸ್ತಾವಿಕ ಮಾತುಗಳನ್ನಾಡಿದರು.ಅಧ್ಯಾಪಕ ಸಿದ್ದಿಕ್ ಪಾತೂರು 'ಸಾಕ್ಷರ'ದ ಮಹತ್ವವನ್ನು ತಿಳಿಸಿದರು.ಅದ್ಯಾಪಕ ಅಶೋಕ ಕುಮಾರ್ ಸ್ವಾಗತಿಸಿದರು.ಅಧ್ಯಾಪಕಿ ಶೈಲಾಶ್ರಿ ವಂದಿಸಿದರು.