ಬಡಾಜೆ
ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ
ಮಂಜೇಶ್ವರ:ಬಡಾಜೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ
ಗಾಂಧಿ ಜಯಂತಿ ಆಚರಿಸಲಾಯಿತು.ಮುಖ್ಯೋಪಾಧ್ಯರಾದ
ಜಯಶಂಕರ್.ವಿ
ಉಧ್ಘಾಟಿಸಿ,ಮಹಾತ್ಮ
ಗಾಂಧಿಯ ಕುರಿತು ಮಾತನಾಡಿದರು.ವಿದ್ಯಾರ್ಥಿ
ಫಾರಿಸ್ ಸ್ವಾಗತಿಸಿ,
ಶಾಲಾ ನಾಯಕಿ ಅಫ್ನಾ
ಧನ್ಯವಾದಗೈದರು.ಬಳಿಕ
ಶಾಲಾ ಪರಿಸರವನ್ನು
ಶುಚೀಕರಣಗೊಳಿಸಲಾಯಿತು.ಅಧ್ಯಾಪಕ
ಅಶೋಕ್ ಕುಮಾರ್ ಕೊಡ್ಲಮೊಗರು,
ಅಧ್ಯಾಪಕ ಎಮ್.ಎ.ಸಿದ್ದೀಖ್
ಪಾತೂರು,ಅಧ್ಯಾಪಕಿ
ಶೈಲಾಶ್ರೀ ಸಹಕರಿಸಿದರು.
ಸಿಹಿ ತಿಂಡಿ ವಿತರಿಸಲಾಯಿತು.
ಬಡಾಜೆ
ಶಾಲೆಯಲ್ಲಿ ನಾಡಹಬ್ಬ ದಸರಾ ಆಚರಣೆ
ಮಂಜೇಶ್ವರ:ಬಡಾಜೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ
ನಾಡ ಹಬ್ಬವನ್ನು ಬಹಳ ವಿಜೃಂಭಣೆಯಿಂದ
ಆಚರಿಸಲಾಯಿತು.ಶಾಲಾ
ವಿದ್ಯಾರ್ಥಿಗಳಿಗೆ ವಿವಿಧ
ಸ್ವರ್ಧೆಗಳನ್ನು
ನಡೆಸಲಾಯಿತು.ಹಗ್ಗಜಗ್ಗಾಟ,ನಾಡಗೀತೆ,ಸಂಗೀತ
ಕುರ್ಚಿ ಮೊದಲಾದ ಸ್ವರ್ಧೆಗಳನ್ನು
ನಡೆಸಲಾಯಿತು.ಬಳಿಕ
ನಡೆದ ಸಭಾಕಾರ್ಯಕ್ರಮದಲ್ಲಿ
ಶಿಕ್ಷಕರು ನಾಡಹಬ್ಬ
ದಸರಾ ಆಚರಣೆಯ ಮಹತ್ವವನ್ನು
ತಿಳಿಸಿದರು.ಅಧ್ಯಾಪಕ
ಅಶೋಕ್ ಕುಮಾರ್ ಕೊಡ್ಲಮೊಗರು
ನೇತೃತ್ವ ವಹಿಸಿದರು.,
ಹಿರಿಯ ಅಧ್ಯಾಪಕಿ
ಶೈಲಾಶ್ರೀ ಉಧ್ಘಾಟಿಸಿದರು.,ಅಡುಗೆಯಾಳು
ಲಲಿತಕ್ಕ ಸಹಕರಿಸಿದರು.
ಹೃತ್ಪೂರ್ವಕ ಅಭಿನಂದನೆಗಳು
ReplyDelete